ಗುರುವಾರ, ಆಗಸ್ಟ್ 8, 2019

ಚಿಖಾಲೆಯ ಚಮತ್ಕಾರ

ಚಿಖಾಲೆಯ ಚಮತ್ಕಾರ 

ನಮಸ್ಕಾರ ಗೆಳೆಯರೇ ....
ಹೇಗಿದಿದ್ದೀರಾ ??
ನಾನಾ?? ನಾನು ಚೆನ್ನಾಗಿದ್ದೇನೆ ಬಿಡಿ
ನಾನು ಇವತ್ತು ನಿಮಗೆ ಬೆಳಗಾವಿಯಿಂದ ಸರಿ ಸುಮಾರು ೪೦ ಕಿ.ಮೀ. ಇರುವ ಚಿಖಲೆ ಜಲಪಾತದ ಕಡೆ ಕರೆದುಕೊಂಡು ಹೋಗುತ್ತೇನೆ. ಬನ್ನಿ ಹಾಗೆ ಒಂದು ರೌಂಡ್ ಹಾಕ್ಕೊಂಡ್ ಬರುವ.
ನಾನು ನನ್ನ ಗೆಳೆಯ ಆನಂದ ಇಬ್ಬರು ಸರಿ ಸುಮಾರು ಬೆಳಿಗ್ಗೆ :೩೦ ಘಂಟೆಗೆ ರೂಮಿನಿಂದ ಹೊರಟೆವು. ಛಳಿಯಲ್ಲಿ ಬೆಳ್ಳಂ ಬೆಳಿಗ್ಗೆ ವಾತಾವರಣಕ್ಕೆ ನನ್ನ ಮನ ಸೋತುಹೋಯಿತು. ಜಲಪಾತಕ್ಕೆ ಹೋಗುವ ಮುನ್ನ ನಾವು ಘಾಟ್ ನಲ್ಲಿ ಹೋಗುವಾಗ ಜಿಟಿ ಜಿಟಿ ಮಳೆ ಬರುತ್ತಾ ಇತ್ತು. ಘಾಟ್ನಲ್ಲಿ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತ ಅಲ್ಲಲ್ಲಿ ಸ್ವಲ್ಪ ಹೊತ್ತು ಕುಳಿತುಕೊಂಡು ಹೋಗುತ್ತಿದ್ದೆವು.
ಚಿಖಾಲೆಯ ಚಮತ್ಕಾರ
ಪ್ರಕೃತಿಯ ಮಡಿಲಲ್ಲಿ  ಒಂದು ನೋಟ

Chikhale falls road
ಗೆಳೆಯ ಆನಂದ್ 
ಅರಣ್ಯ ಸಂರಕ್ಷಣದ ಮಹತ್ವವನ್ನು ಅರಿಯುತ್ತಾ ಅದನ್ನು ಕಾಪಾಡುವ ಬಗೆಯ ಬಗ್ಗೆ ಯೋಚಿಸುತ್ತ ಮತ್ತೆ ಜಲಪಾತದ ಕಡೆಗೆ ಪಯಣ ಬೆಳೆಸಿದೆವು. ಮುಂದೆ ಸಾಗುತ್ತ ಸಾಗುತ್ತ ಚಿಖಲೆ ಜಲಪಾತಕ್ಕೆ ದಾರಿ  ಎಂದು ಎಡಭಾಗಕ್ಕೆ  ಇದ್ದ ಫಲಕವನ್ನು ನೋಡಿ  ನಮ್ಮ  ಬೈಕನ್ನು ಕಡೆ ತಿರುಗಿಸಿಕೊಂಡು ಹೊರಟೆವು. ಬೆಳಿಗ್ಗೆಯ ತಂಪಾದ ಮಂಜು ಮುಂದೆ ಸಾಗಲು ಮನಸ್ಸೇ ಆಗಲಿಲ್ಲ. ಹೇಗೋ ಹೇಗೋ ಮನಸ್ಸು ಮಾಡಿ ಮುಂದೆ ಸಾಗಿತು ಪಯಣ.
Chikhale falls road
ಮಂಜು ತುಂಬಿದ ಮನೋಹರ ದಾರಿ 
ಮುಂದೆ  ಹೋಗುತ್ತಾ ಹೋಗುತ್ತಾ ಮಳೆಯಾದಕಾರಣ ಅಲ್ಲಲ್ಲಿ ಕೆಸರು ಇತ್ತು ಅದನ್ನು ಹಾಗೂ ಹೀಗೋ ಹರ ಸಾಹಸ ಮಾಡಿ ದಾಟಿಕೊಂಡು ಹೋದೆವು. ಜಲಪಾತದ ಹತ್ತಿರ ಹತ್ತಿರ ಹೋದ ಹಾಗೆ ಅದರ ಶಬ್ದ ಕೇಳುತ್ತಿತ್ತು. ಅದರ ಆರ್ಭಟ ತುಂಬಾ ಜೋರ್ ಆಗೇ ಇತ್ತು. ಅದನ್ನು ಅನುಸರಿಸುತ್ತ ಹಾಗೆ ಮುಂದೆ ಹೋದಂತೆ ಅದರ ಆರ್ಭಟ ಇನ್ನೂ ಜೋರಾಗಿ ಕೇಳಿಸುತ್ತಾ ಇತ್ತು
ಆದರೆ ಇನ್ನು ಮುಂದೆ ಹೋಗುವ ದಾರಿ ಮಾತ್ರ ತುಂಬಾ ಕಷ್ಟವಾಗಿತ್ತು. ನಮ್ಮ ಬೈಕ್ ಹೋಗಲು ಸಾಧ್ಯವೇ ಇರಲಿಲ್ಲ. ಅಲ್ಲಿ ದಾರಿಹೋಕರೊಬ್ಬರಿಗೆ ಕೇಳಿದೆವು. ಅವರು ಹೇಳಿದ್ದು ಕೇಳಿ ನಮಗಿನ್ನು ಕಾಲ್ನಡಿಗೆಯೇ ಗತಿಯೆಂದು ನಮ್ಮ ಬೈಕ್ ಅನ್ನು ಅಲ್ಲಿಯೇ ನಿಲ್ಲಿಸಿ ಹಾಗೆಯೇ ನಡೆದುಕೊಂಡು ಹೋದೆವು. ಮುಂದೆ ನಡೆದುಕೊಂಡು ಹೋದಂತೆ ಜಲಪಾತದ ಆರ್ಭಟಕ್ಕೆ ನಮ್ಮ ಕಿವಿಗಳು ಧನ್ಯವಾದವು. ಜಲಪಾತದ ಮೇಲ್ನೋಟದ ಒಂದು ವಿಹಂಗಮ ನೋಟ ಇಲ್ಲಿದೆ ನೋಡಿ. ಅದನ್ನು ನೋಡುತ್ತಾ ನಮ್ಮನ್ನು ನಾವೇ ಮರೆತು ಹೋದೆವು. ಸುಮಾರು ಒಂದು ಘಂಟೆಯ ಕಾಲ ಅಲ್ಲೇ ಇದ್ದು ನಂತರ ನಮ್ಮ ಬೆಳಗಾವಿಗೆ ಪಯಣ ಮುಂದುವರಿಸಿದೆವು.
Chikhale falls Top View
ಚಿಖಾಲೆ ಜಲಪಾತದ ವಿಹಂಗಮ ಮೇಲ್ನೋಟ
ಚಿಖಾಲೆಯ ಸೌಂದರ್ಯವನ್ನು ಮನಸೂರೆಗೊಳಿಸಿಕೊಂಡು ಮರಳುವಾಗ ನಮಗೆ ಕೆಲವು ಅಪರಿಚಿತ ಗೆಳೆಯರು ಎದುರಾದರು. ಅವರು ನಮಗೆ ಅಲ್ಲೇ ಹತ್ತಿರ ಇನ್ನೊಂದು ಚಿಕ್ಕ ಜಲಪಾತ ಇದೆ ಎಂದು ಹೇಳಿ ಅದಕ್ಕೆ ದಾರಿಯನ್ನು ಹೇಳಿದರು . ನಮಗೆ ದಾರಿ ಸರಿಯಾಗಿ ಅರ್ಥವಾಗಲಿಲ್ಲ ಅದಕ್ಕೆ ಅವರೇ ನಮ್ಮ ಜೊತೆ ಬಂದು ಜಲಪಾತವನ್ನು ತೋರಿಸಿದರು
Small Falls Near Chikhale Falls
ಅನಾಮಿಕ ಜಲಪಾತ 
ನಮಗೆ ಅನಾಮಿಕ ಜಲಪಾತ ತೋರಿಸಿ, ನಮಗೆ ಹೊಸ ಸ್ಥಳವನ್ನು ಪರಿಚಯ ಮಾಡಿಕೊಟ್ಟ, ನಂತರ ಪರಿಚಯವಾದ ಪರಿಚಿತ ಗೆಳಯರಿಗೆ ವಂದನೆಗಳನ್ನು ಹೇಳಿ ಅಲ್ಲಿಂದ ನಮ್ಮ ಬೆಳಗಾವಿ ಪಯಣ ಶುರುವಾಯಿತು. ಯಾಕಾದರೂ ನಾಡಿಗೆ ಹೋಗೋದು ಗುರು ಇಲ್ಲೇ ಕಾಡಲ್ಲೇ ಇದ್ದು ಬಿಡೋಣ ಎನ್ನಿಸಿದರೂ ಆದರೂ  ನಮ್ಮ ನಾಡುನಮ್ಮ ಬೆಳಗಾವಿ ನಮಗೆ ಚಂದ ಎಂದು ಬೇಡವೆನ್ನಿಸಿದರೂ ಬಿಡುವಿಲ್ಲದಂತೆ ಪ್ರಯಾಣ ಬೆಳೆಸಿದೆವು